ಬೇಡಿಕೆ: ಉಡುಪಿಯ ೧೫೦೦ ಪಾರಂಪರಿಕ ಮರಗಳನ್ನು ರಕ್ಷಿಸಿ
ನಿರ್ಧರಿಸುವವರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
ಸಮಸ್ಯೆ ಏನು?
ಉಡುಪಿ ಜಿಲ್ಲೆಯ ಮಲ್ಪೆಯಿಂದ ಆರಂಭವಾಗಿ ತೀರ್ಥಹಳ್ಳಿಯಲ್ಲಿ ಕೊನೆಗೊಳ್ಳುವ ರಾಷ್ಟ್ರೀಯ ಹೆದ್ದಾರಿ 169ಎ ಅಗಲೀಕರಣಕ್ಕೆ 1500 ಮರಗಳನ್ನು ಕಡಿದು ಹಾಕಲಾಗುತ್ತಿದೆ. ಪ್ರಸ್ತುತ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಏನ್.ಹೆಚ್ 169ಎ ರಸ್ತೆಯ ಪರ್ಕಳ ಮತ್ತು ಹೆಬ್ರಿ ನಡುವೆ ನಾಲ್ಕು ಮಾರ್ಗದ ರಸ್ತೆ ನಿರ್ಮಾಣವನ್ನು ಪ್ರಾರಂಭಿಸಿದೆ. ಅತಿ ದುಬಾರಿಯಾದ ‘ಅಭಿವೃದ್ಧಿ’ ಯೋಜನೆಯನ್ನು ಹಂತಹಂತವಾಗಿ ಮತ್ತು ರಾಷ್ಟ್ರೀಯ ಹೆದ್ದಾರಿಯ ವಿಸ್ತಾರವಾದ ಭಾಗಗಳ ಮೂಲಕ ನಡೆಸಲಾಗುತ್ತಿದೆ. ಆರೋಗ್ಯಕರ ಹಳೆಯ ಮರಗಳಲ್ಲಿ ಮಾವು, ಆಲ ಹಾಗೂ ಇನ್ನಿತರ ಜಾತಿಗಳು ಸೇರಿವೆ. ಆಶ್ಚರ್ಯಕರವಾಗಿ, ಪ್ರಸ್ತಾಪಿತ ವಿಸ್ತರಣೆಯ ಒಂದು ಭಾಗವು ಆಗುಂಬೆ, ಉಡುಪಿ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಮೀಸಲು ಅರಣ್ಯಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟಗಳ ಪರಿಸರ-ಸೂಕ್ಷ್ಮ ವಲಯದ ಮೂಲಕ ಹಾದುಹೋಗುತ್ತದೆ.
ಇದು ಏಕೆ ಮುಖ್ಯವಾಗಿದೆ?
ಸಂಪೂರ್ಣವಾಗಿ ಬೆಳೆದ ಮರಗಳನ್ನು ದೊಡ್ಡ ಪ್ರಮಾಣದಲ್ಲಿ ನೆಲಸಮಗೊಳಿಸುವುದು ಮತ್ತು ಪರಿಸರ ಸೂಕ್ಷ್ಮ ವಲಯಗಳಲ್ಲಿ ಮಣ್ಣನ್ನು ಅಗೆಯುವುದರಿಂದ ಕಲ್ಲು ಬೀಳುವಿಕೆ ಮತ್ತು ಭೂಕುಸಿತಗಳು ಹೆಚ್ಚಾಗುತ್ತವೆ. “ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹಾದು ಹೋಗುವ ಹೆದ್ದಾರಿ ಯೋಜನೆಗಳಿಗೆ ಪಾರಂಪರಿಕ ಮರಗಳನ್ನು ಕೊಡಲಿ ಹಾಕಿರುವುದರಿಂದ ಬೆಟ್ಟಗಳು ಕುಸಿಯುತ್ತಿರುವ ಘಟನೆಗಳು ಹೆಚ್ಚಿವೆ,” ಎಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆಯಲಾಗಿದೆ.
ರಸ್ತೆಯ ಅಗಲೀಕರಣ ಯೋಜನೆಗಾಗಿ ದಾರಿ ಮಾಡುತ್ತಿರುವ ಜಾಗದಲ್ಲಿ ಪಾರಂಪರಿಕ 1500ಕ್ಕೂ ಅಧಿಕ ಮರಗಳಿದೆ, ಹಾಗು ಅವು ಕನಿಷ್ಠ 50-100 ವರ್ಷಗಳಷ್ಟು ಹಳೆಯದ್ದಾಗಿದೆ. ಈ ವೃಕ್ಷಗಳು ಹಲವಾರು ಜಾತಿಯ ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿದೆ.
ಈ ಉದ್ದೇಶಿತ ವಿಸ್ತರಣೆಯು ಏಕಾಂತ ವನ್ಯಜೀವಿ ವಲಯಗಳಿಗೆ ಮೀಸಲಾಗಿದ್ದ ಅರಣ್ಯಗಳ ಸಂರಕ್ಷಿತ ಪ್ರದೇಶಗಳ ಮೂಲಕ ಹಾದುಹೋಗುತ್ತದೆ ಮತ್ತು ಇದು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಹವಾಮಾನ ಬಿಕ್ಕಟ್ಟಿನ ದುಷ್ಪರಿಣಾಮಗಳ ವಿರುದ್ಧ ಜಗತ್ತು ಹೋರಾಡುತ್ತಿರುವಾಗ, ಮತ್ತು ವೇಗವಾಗಿ ಕ್ಷೀಣಿಸುತ್ತಿರುವ ವೈಪರೀತ್ಯ ಹವಾಮಾನದ ಬಗ್ಗೆ ಪರಿಸರವಾದಿಗಳು ಆತಂಕಗೊಳಗಾಗಿದ್ದಾರೆ. ಅಷ್ಟೇ ಅಲ್ಲದೇ mangalorecity.in ಅವರ ಪ್ರಕಾರ "ಪ್ರಸ್ತುತ NH169A ನಲ್ಲಿ ಯಾವುದೇ ಸಂಚಾರ ದಟ್ಟಣೆಯಿಲ್ಲದ ಕಾರಣ ಚತುಷ್ಪಥ ಯೋಜನೆಯು ಅನಗತ್ಯವಾಗಿದೆ" .
ನೀವೇನು ಮಾಡಬಹುದು?
ಪರಿಸರಕ್ಕಾಗಿ ಮಾತನಾಡಿ ಮತ್ತು ಪಾರಂಪರಿಕ ಮರಗಳಿಗಾಗಿ ನಿಮ್ಮ ಧ್ವನಿಯೆತ್ತಿ. ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಉಡುಪಿಯ 1500ಕ್ಕೂ ಅಧಿಕ ಮರಗಳನ್ನು ಉಳಿಸಲು ಮನವಿಗೆ ಇಂದೇ ಸಹಿ ಮಾಡಿ.
ಕನ್ನಡಕ್ಕೆ ಅನುವಾದ:
ಹರಿಹರ ಬಿ ಆರ್ (ಅಕ್ಷಂತಲ ಬರಹ)
ಮೂಲ:
https://www.99acres.com/articles/work-on-thirthahalli-malpe-highway-begins-in-phases-nid.html

1500 ಮರಗಳನ್ನು ಉಳಿಸಲು ಮನವಿ ಪತ್ರಕ್ಕೆ ಸಹಿ ಹಾಕಿದ್ದಕ್ಕೆ ಧನ್ಯವಾದಗಳು.
ಒಂದು ಅಭಿಯಾನಕ್ಕೆ ಸೇರಿಸಲಾದ ಪ್ರತಿಯೊಂದು ಹೆಸರು ಅಭಿಯಾನವನ್ನು ಯಶಸ್ವಿಯಾಗಲು ಒಂದು ಹೆಜ್ಜೆ ಹತ್ತಿರ ತೆಗೆದುಕೊಳ್ಳುತ್ತದೆ.
ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ
ಧನ್ಯವಾದ
ಜಟ್ಕಾ ಡಾಟ್ ಆರ್ಗ್ ತಂಡ
----------------------------------------------
ನಮಗೆ ಬೆಂಬಲ ನೀಡಿ